Your generous donations help provide essential resources and support for vital causes. Join us in making a positive impact and addressing urgent needs in our community.
ದಿನಾಂಕ 19/07/2025 ರಂದು ಸದಲಾಗ ಗ್ರಾಮದಲ್ಲಿ ನಮ್ಮ ಚಿಕ್ಕೋಡಿ ಸಾಂತ್ವನ ಕೇಂದ್ರದಿಂದ ಮಹಿಳೆಯಾರಿಗೆ ಬಾಲ್ಯವಿವಾಹ, ಕಾರಣಗಳು, ಪರಿಣಾಮಗಳು. ತಡೆಗಟ್ಟುವ ಕ್ರಮ,ಪೋಕ್ಸ್ ಕಾಯಿದೆ ಮಹಿಳೆಯರ ಹಕ್ಕುಗಳು, ಮಹಿಳಾ ಮತ್ತು ಮಕ್ಕಳ ಸಹಾಯವಾಣಿ 1091&1098/112.ಬಗ್ಗೆ ಅರಿವು & ಉಚಿತ ಕಾನೂನಿನ ಆರಿವು ಮೂಡಿಸಲಾಯಿತು ದಿನಾಂಕ 4-8 2025 ರಂದು ಸಾಂತ್ವನ ಕೇಂದ್ರದ ವತಿಯಿಂದ ಧರ್ಮಸ್ಥಳ ಸ್ವಸಹಾಯ ಸಂಘದ ಸುಮಾರು 40 ಜನ ಮಹಿಳೆಯರಿಗೆ ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಧಿಕಾರಿಗಳ ಇಲಾಖೆ ಯನ್ನು ಭೇಟಿ ಮಾಡಿಸಲಾಯಿತು ಹಾಗ ಮಹಿಳೆಯರಿಗಾಗಿರುವಂತಹ ದೌರ್ಜನ್ಯ ಅತ್ಯಾಚಾರ ಕಿರುಕುಳ ಹಲವಾರು ಸಮಸ್ಯೆಗಳನ್ನು ಹೇಗೆ ಎದುರಿಸುವುದು ಹೇಗೆ, ಮಹಿಳೆಯರಿಗಾಗಿ ಈ ಇಲಾಖೆಯು ಹೇಗೆ ಕೆಲಸ ಮಾಡುತ್ತಿದೆ, ಹಾಗೂ ಮಹಿಳಾ ಸಬಲೀಕರಣದ ಬಗ್ಗೆ, ಭಾಗ್ಯಲಕ್ಷ್ಮಿ ಯೋಜನೆ ಗ್ರಹಲಕ್ಷ್ಮಿ ಯೋಜನೆ, ಅಂಗನವಾಡಿಯಿಂದ ಮಕ್ಕಳಿಗೆ ಪೌಷ್ಟಿಕ ಆಹಾರದ ಬಗ್ಗೆ, ಸ್ವಸಹಾಯ ಸಂಘಗಳಿಗೆ ಸಬ್ಸಿಡಿ ಸಾಲ, ಬೀಜಧನ, ಉದ್ಯೋಗಿನಿ ಯೋಜನೆ ಮಹಿಳೆಯರು ಆರ್ಥಿಕವಾಗಿ ಹೇಗೆ ಬಲಿಷ್ಠರಾಗಬೇಕೆಂದು, ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೇಗೆ ಅಭಿವೃದ್ಧಿ ಹೊಂದಬೇಕೆಂಬ ಸಂಪೂರ್ಣವಾದ ಮಾಹಿತಿಯನ್ನು ಶಿಶು ಅಭಿವೃದ್ಧಿಯೋಜನಾಧಿಕಾರಿ ಇಲಾಖೆಯ ಸಿಬ್ಬಂದಿಯವರಾದ ಶ್ರೀ ಅನಿಲ್ ಸರ್ ಅವರು ಮಾಹಿತಿಯನ್ನು ನೀಡಿರುತ್ತಾರೆ ಹಾಗೂ ಮಹಿಳೆಯರು ಕೂಡ ತಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡಿದ್ದಾರೆ ನಮ್ಮ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವರಿಕೆ ಮಾಡಿಕೊಂಡಿದ್ದಾರೆ. ದಿನಾಂಕ 4.08.2025 ರಂದು ನಮ್ಮ ಸಾಂತ್ವನ ಕೇಂದ್ರದ ವತಿಯಿಂದ ಧರ್ಮಸ್ಥಳ ಸ್ವಸಹಾಯ ಸಂಘದ ಸುಮಾರು 40 ಜನ ಮಹಿಳೆಯರಿಗೆ ಅಗ್ನಿಶಾಮಕ ಠಾಣೆ ಚಿಕ್ಕೋಡಿ ಇಲಾಖೆಯನ್ನು ಭೇಟಿ ಮಾಡಿಸಲಾಯಿತು ಹಾಗೂ ಮಹಿಳೆಯರಿಗೆ ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಲೀಕ್ ಆದಾಗ ಭಯಗೊಳ್ಳದೆ ಬೆಂಕಿ ಆಹುತಿಯನ್ನು ಹೇಗೆ ತಡೆಗಟ್ಟುವುದು, ಯಾವ ರೀತಿ ಮುಂಜಾಗ್ರತೆ ಕ್ರಮವನ್ನು ಕೈಗೊಳ್ಳಬೇಕು, ಸಿಲೆಂಡರ್ ಎಕ್ಸ್ಪರಿ ಡೇಟ್ ಹೇಗೆ ಕಂಡುಹಿಡಿಯಬೇಕು ಯಾವ ರೀತಿ ಬೆಂಕಿಯಿಂದ ಆಗುವ ಅನಾಹುತವನ್ನು ತಪ್ಪಿಸಿಕೊಂಡು ಮಹಿಳೆಯರು ಹೇಗೆ ಸುರಕ್ಷಿತವಾಗಿರಬೇಕು ಎಂದು ಸಂಪೂರ್ಣವಾದ ಮಾಹಿತಿಯನ್ನು, ಹಾಗೂ ತಮ್ಮ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದನ್ನು ಚಿಕ್ಕೋಡಿ ಅಗ್ನಿಶಾಮಕ ಠಾಣಾಧಿಕಾರಿ ಮಾನ್ಯ ಶ್ರೀ ಆನಂದ. ಮಾದರ್., ಶ್ರೀ ನದಾಫ್ ಸರ್ ಹಾಗೂ ಶ್ರೀ ಮನೋಹರ್ ಸರ್ ಮಾಹಿತಿಯನ್ನು ನೀಡಿರುತ್ತಾರೆ. ಮಹಿಳೆಯರು ಕೂಡ ಅಗ್ನಿಶಾಮಕ ಠಾಣೆಯನ್ನು ಭೇಟಿ ನೀಡಿ ಅತಿ ಅವಶ್ಯಕ ಮಾಹಿತಿ ಮತ್ತು ಜ್ಞಾನವನ್ನು ಪಡೆದುಕೊಂಡಿದ್ದಾರೆ ದಿನಾಂಕ 4-8 2025 ರಂದು ಸಾಂತ್ವಾನ ಕೇಂದ್ರದ ವತಿಯಿಂದ ಧರ್ಮಸ್ಥಳ ಸ್ವ ಸಹಾಯ ಸಂಘದ ಸುಮಾರು 40 ಜನ ಮಹಿಳೆಯರಿಗೆ ನಮ್ಮ ಚಿಕ್ಕೋಡಿಯ ಪೊಲೀಸ್ ಠಾಣೆ ಇಲಾಖೆಯನ್ನು ಭೇಟಿ ಮಾಡಿಸಲಾಯಿತು ಹಾಗೂ ಮಾನ್ಯ ಪಿಎಸ್ಐ ಸಾಹೇಬರಾದ ಶ್ರೀ. ಬಸಗೌಡ.ಎಸ್. ನೆರ್ಲಿ ಇವರು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.... ಈ ಒಂದು ಕಾರ್ಯಕ್ರಮದಿಂದ ಮಹಿಳೆಯರಿಗೆ ಪೊಲೀಸ್ ಠಾಣೆಯು ಮಹಿಳೆಯರ ಹಲವಾರು ಸಮಸ್ಯೆಯನ್ನು ಬಗೆಹರಿಸವಲ್ಲಿ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಸಂಪೂರ್ಣವಾದ ಮಾಹಿತಿ ಪಡೆದುಕೊಂಡಿದ್ದಾರೆ. ದಿನಾಂಕ 4.8.2025 ರಂದು ಧರ್ಮಸ್ಥಳ ಸ್ವಸಹಾಯ ಸಂಘ ಚಿಕ್ಕೋಡಿ ತಾಲೂಕಿನ ಮಂಜರಿ ವಾಡಿ ಗ್ರಾಮದಿಂದ ಸುಮಾರು 40 ಜನ ಮಹಿಳೆಯರು ನಮ್ಮ ಸಾಂತ್ವಾನ ಕೇಂದ್ರಕ್ಕೆ ಭೇಟಿ ನೀಡಿರುತ್ತಾರೆ ಹಾಗೂ ನಮ್ಮ ಸಾಂತ್ವಾನ ಕೇಂದ್ರದಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ,ವರದಕ್ಷಣೆ ಕಿರುಕಳ,ಅತ್ಯಾಚಾರ,ಲೈಂಗಿಕ ಕಿರುಕುಳ ಮಾನಸಿಕ ಕಿರುಕಳ ಇಂತಹ ಸಮಸ್ಯೆಗಳಿಗೆ ಪರಿಹಾರ ಹೇಗೆ ಕಂಡುಕೊಳ್ಳಬೇಕು ಇಂಥ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಮ್ಮ ಸಾಂತ್ವಾನ ಕೇಂದ್ರ ಯಾವ ರೀತಿ ಕೆಲಸ ಮಾಡುತ್ತಿದೆ ಬಾಲ್ಯ ವಿವಾಹ ತಡೆಗಟ್ಟುವ ಕ್ರಮಗಳು, ಪೋಕ್ಸೋ ಕಾಯ್ದೆ, ಶಿಕ್ಷಣದ ಮಹತ್ವ, ತಮ್ಮ ಮಕ್ಕಳ ಜವಾಬ್ದಾರಿ ಮಹಿಳೆಯರ ಪಾತ್ರ, ಹಾಗೂ ಸ್ವಸಹಾಯ ಸಂಘಗಳಿಂದ ತೆಗೆದುಕೊಂಡು ಸಾಲವನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬೇಕೆಂಬುದನ್ನು ತಿಳಿಸಿ, ಉಚಿತ ಕಾನೂನಿನ ನೆರವು ಮತ್ತು ಅರಿವಿನ ಬಗ್ಗೆ ಮಾಹಿತಿ ನೀಡಿ ಕೊನೆಯದಾಗಿ ಮಕ್ಕಳ ಸಹಾಯವಾಣಿ ನಂಬರ್ 1098 /112 ಹಾಗೂ ಮಹಿಳಾ ಸಹಾಯವಾಣಿ ನಂಬರ್ 1091 ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಯಿತು ದಿನಾಂಕ 02/08/2025 ರಂದು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಚಿಕ್ಕೋಡಿ ಮಾನ್ಯ ಉಪ ನಿರ್ದೇಶಕರು ಬೆಳಗಾವಿ ರವರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಚಿಕ್ಕೋಡಿ ರವರು ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿದರು
To help persons with disability get transformed into self actualizing dignified human beings as socially equal partners.
Remove barriers imposed by disability and instill faith and hope in disabled persons so that they start owning the process of their own development.
ಆಶಾಜ್ಯೋತಿ ಎಸ್.ಸಿ./ಎಸ್. ಟಿ. ಮಹಿಳಾ ಅಭಿವೃದ್ಧಿ ಕೇಂದ್ರದ. ಆಶಾಕಿರಣ ಬುದ್ಧಿಮಾಂದ್ಯ ಮತ್ತು ಅಂಗವಿಕಲ ಮಕ್ಕಳ ವಸತಿ ವಿಶೇಷ ಶಾಲೆಯ ನೂತನ ಕಟ್ಟಡವನ್ನು ಕುಮಾರಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಸಂಸದರು ಚಿಕ್ಕೋಡಿ ಅಮೃತಸ್ಥದಿಂದ ಉದ್ಘಾಟನೆ ಮಾಡಲಾಯಿತು ಹಾಗೂ ಮುಖ್ಯ ಅತಿಥಿಗಳಾದ ಸ್ಥಳೀಯ ಶಾಸಕರಾದ ರಾಜು ಸೆಟ್ ಉಪಸ್ಥಿತರಿದ್ದ ಕ್ಷಣದಲ್ಲಿ ತೆಗೆದ ಭಾವಚಿತ್ರಗಳು.
Read More
Lorem ipsum dolor sit amet consectur adip sed eiusmod amet consectur adip sed eiusmod tempor amet consectur adip sed eiusmod amet consectur adip sed eiusmod tempor amet consectur adip sed eiusmod amet consectur adip sed eiusmod tempor.
We are friendly to each other.
If you join with us,We will give you free training.
Its an opportunity to help poor Environments.
No goal requirements.
Joining is tottaly free. We dont need any money from you.
Join With Us